ಗಣೇಶನ ಮದುವೆ ಯು 1990 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ ವಾಗಿದ್ದು ಫಣಿರಾಮಚಂದ್ರ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನಂತನಾಗ್ , ವಿನಯಾಪ್ರಸಾದ್, ಮುಖ್ಯಮಂತ್ರಿ ಚಂದ್ರು , ರಮೇಶ್ ಭಟ್ ಅವರುಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ತುಂಬಾ ಯಶಸ್ವಿಯಾದ ಚಲನಚಿತ್ರವಾಗಿದ್ದು ಅತ್ಯುತ್ತಮವಾದ ಹಾಸ್ಯಪ್ರಧಾನ ಕನ್ನಡ ಚಲನಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ. == ಪಾತ್ರವರ್ಗ == ಅನಂತನಾಗ್ ಮುಖ್ಯಪಾತ್ರವಾದ ಗಣೇಶ ಆಗಿ ವಿನಯಾ ಪ್ರಸಾದ್ ಆದಿಲಕ್ಷ್ಮಿ ಆಗಿ ಮುಖ್ಯಮಂತ್ರಿ ಚಂದ್ರು ರಮಣ ಮೂರ್ತಿ ಆಗಿ ರಮೇಶ್ ಭಟ್ ಶಾಸ್ತ್ರಿ ಆಗಿ — ವೈಶಾಲಿ ಕಾಸರವಳ್ಳಿ ಸತ್ಯಭಾಮ ಆಗಿ ಶಿವರಾಂ ಗೋವಿಂದರಾಯನಾಗಿ ಎಂ. ಎಸ್. ಉಮೇಶ್ — ವಠಾರದ ಇನ್ನೊಬ್ಬ ವಾಸಿಯಾಗಿ ರತ್ನಾಕರ ವಾಮನಮೂರ್ತಿಯಾಗಿ ಸತ್ಯಭಾಮ ಕನಕ ಆಗಿ ಅಂಜಲಿ ಸುಧಾಕರ್ ಅಭಿಲಾಶಾ ಆಗಿ ಸಿಹಿ ಕಹಿ ಚಂದ್ರು ಚಂದ್ರು ಪಾತ್ರದಲ್ಲಿ ಹೊನ್ನವಳ್ಳಿ ಕೃಷ್ಣ ಪರಮೇಶಿ ಆಗಿ. ಮಂಜುಮಾಲಿನಿ ಗಜಲಕ್ಷ್ಮಿಯಾಗಿ ಪ್ರಥ್ವಿರಾಜ್ ಪರಮೇಶಿಯ ತಂದೆಯಾಗಿ ವಿಷ್ಣುವರ್ಧನ್ ಅತಿಥಿ ಪಾತ್ರದಲ್ಲಿ ತಾವೇ ಆಗಿ == ಹಿನ್ನೆಲೆಸಂಗೀತ == ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ರಾಜನ್-ನಾಗೇಂದ್ರ ಜೋಡಿಯು ಒದಗಿಸಿದೆ.